ಶಾಪ - ಅಶೋಕ್ ಪಾಟೀಲ್ ನಿರ್ದೇಶನದ 2001 ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ರಮೇಶ್ ಅರವಿಂದ್, ಅನು ಪ್ರಭಾಕರ್ ಮತ್ತು ಬಿ. ಸಿ. ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ರಮೇಶ್ ಅರವಿಂದ್ ಅನು ಪ್ರಭಾಕರ್ ಬಿ.ಸಿ. ಪಾಟೀಲ್ ಅವಿನಾಶ್ ಕೆ ಎಸ್ ಅಶ್ವಥ್ == ಕಥಾವಸ್ತು == ಶಾಪ- ಒಬ್ಬ ವ್ಯಕ್ತಿ (ಶೇಖರ್ ಪಾತ್ರದಲ್ಲಿ ರಮೇಶ್) ತನ್ನ ತಂದೆಯಿಂದ ಈ ಬಾಲ್ಯದಲ್ಲಿ ಭಾವನಾತ್ಮಕವಾಗಿ ನಿಂದನೆಗೆ ಒಳಗಾದ ಮತ್ತು ಅವನು ತನ್ನ ವಯಸ್ಕ ಜೀವನದ ಮೂಲಕ ತನ್ನ ಒಳಗಿನ ರಾಕ್ಷಸರೊಂದಿಗೆ ಹೇಗೆ ಹೋರಾಡುತ್ತಾನೆ ಎಂಬುದರ ಕಟುವಾದ ಕಥೆಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ಪ್ರೇಮಕಥೆಯೊಂದನ್ನು ಜೋಡಿಸಲಾಗಿದೆ. == ಪ್ರಶಸ್ತಿಗಳು == 1. ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ - ಅಶೋಕ್ ಪಾಟೀಲ್ 2. ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ - ಅನು ಪ್ರಭಾಕರ್ 3. ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ - ಅಶೋಕ್ ಕಶ್ಯಪ್ 4. 2 ನೇ ಅತ್ಯುತ್ತಮ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ - ಅಶೋಕ್ ಪಾಟೀಲ್ 5. ಅತ್ಯುತ್ತಮ ನಟಿಗಾಗಿ ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿ - ಅನು ಪ್ರಭಾಕರ್ == ಚಿತ್ರಸಂಗೀತ == ಹಂಸಲೇಖ ಸಂಗೀತ ನೀಡಿದ್ದು, ಕಿವಿಗೆ ಇಂಪಾಗಿದೆ. == ಉಲ್ಲೇಖಗಳು ==